MOKS Campus
MOKS Campus
MOKS Campus
ಜ್ಞಾನ, ಐಕ್ಯ, ಸೇವೆ

MOKS

ಕರ್ನಾಟಕ ವಿದ್ಯಾರ್ಥಿ ಸಂಘಟನೆ

ಮಿಸ್ಬಾಹುಸ್ಸುಅದಿಯ ಕರ್ನಾಟಕ ವಿದ್ಯಾರ್ಥಿ ಸಂಘಟನೆ

ನಮ್ಮ ದೂರದರ್ಶಿಗಳು

ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ

ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ

ಕೇರಳದ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರು, ಸೂಫಿ ನಾಯಕರು ಮತ್ತು ಧಾರ್ಮಿಕ ಮಾರ್ಗದರ್ಶಕರಾಗಿದ್ದರು. 'ತಾಜುಲ್ ಉಲಮಾ' (ವಿದ್ವಾಂಸರ ಕಿರೀಟ) ಎಂಬ ಗೌರವ ಬಿರುದನ್ನು ಪಡೆದಿದ್ದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಾಮಿಅ ಸಅದಿಯ್ಯಾ ಸೇರಿದಂತೆ ಹಲವು ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್

ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್

ಕೇರಳದ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರು, ಶಿಕ್ಷಣತಜ್ಞರು ಮತ್ತು ಧಾರ್ಮಿಕ ನಾಯಕರಾಗಿದ್ದರು. 'ನೂರುಲ್ ಉಲಮಾ' (ವಿದ್ವಾಂಸರ ಬೆಳಕು) ಎಂಬ ಬಿರುದನ್ನು ಪಡೆದಿದ್ದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಹಾಗೂ ಆಲ್ ಇಂಡಿಯಾ ಸುನ್ನಿ ಎಜುಕೇಶನ್ ಬೋರ್ಡ್‌ನ ಅಧ್ಯಕ್ಷರಾಗಿದ್ದರು. ಜಾಮಿಅ ಸಅದಿಯ್ಯಾ ಅರಬಿಯ್ಯಾ ಸಂಸ್ಥೆಯ ಪ್ರಮುಖ ಸ್ಥಾಪಕರಲ್ಲಿ ಒಬ್ಬರು.

ನಮ್ಮ ಬಗ್ಗೆ

MOKS Logo

ಜಾಮಿಅ ಸಅದಿಯ್ಯಾ ಅರಬಿಯ್ಯಾದ ಹೃದಯಭಾಗದಲ್ಲಿ ಕನ್ನಡದ ವೈಭವವನ್ನು ಬೆಳೆಸುವ ವೇದಿಕೆ

MOKS – ಮಿಸ್ಬಾಹುಸ್ಸುಆದಾ ಆರ್ಗನೈಸೇಶನ್ ಆಫ್ ಸಅದಿಯ್ಯಾ ಕನ್ನಡ ಸ್ಟೂಡೆಂಟ್ಸ್ (Misbahussuada Organization of Sa'adiya Kannada Students) ಜಾಮಿಅ ಸಅದಿಯ್ಯಾ ಅರಬಿಯ್ಯಾದ ಪ್ರತಿಷ್ಠಿತ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ವಿದ್ಯಾರ್ಥಿಗಳ ಸಂಘಟನೆಯಾಗಿದೆ. ದಕ್ಷಿಣ ಭಾರತದ ಪ್ರಮುಖ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜಾಮಿಅ ಸಅದಿಯ್ಯಾ ಅರಬಿಯ್ಯಾ ಹಲವು ತಲೆಮಾರುಗಳಿಗೆ ಜ್ಞಾನ ಮತ್ತು ಮಾರ್ಗದರ್ಶನ ನೀಡಿದ ಮಹತ್ವದ ವಿದ್ಯಾಕೇಂದ್ರವಾಗಿದೆ.

ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಅವರ ದೂರದೃಷ್ಟಿ ಹಾಗೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ತರ ಆಶಯದೊಂದಿಗೆ MOKS ಸ್ಥಾಪನೆಯಾಯಿತು. ಕನ್ನಡ ವಿದ್ಯಾರ್ಥಿಗಳ ಪ್ರತಿಭೆ, ಜ್ಞಾನ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವೇದಿಕೆಯಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

0+

ವರ್ಷಗಳ ಸೇವೆ

0+

ವಿದ್ಯಾರ್ಥಿಗಳು

0+

ಯೋಜನೆಗಳು

ಹೆರೆನ್ಸಿಯಾ (Herencia)
Herencia Poster 1
Herencia Logo

ಮೂರು ದಶಕಗಳ ಸಾಧನೆ

MOKS ಸ್ಥಾಪನೆಯಾದ 30 ವರ್ಷಗಳ ಸುದೀರ್ಘ ಪಯಣದಲ್ಲಿ, ನಾವು ಜ್ಞಾನ, ಸಂಸ್ಕೃತಿ ಮತ್ತು ಏಕತೆಯ ಸುಂದರ ಪರಂಪರೆಯನ್ನು ನಿರಂತರವಾಗಿ ಬೆಳೆಸಿಕೊಂಡು ಬಂದಿದ್ದೇವೆ. ನೂರಾರು ವಿದ್ಯಾರ್ಥಿಗಳ ಪ್ರಕಾಶಮಾನ ಭವಿಷ್ಯಕ್ಕೆ ಕಾರಣರಾಗಿರುವ ಈ ಸಂಭ್ರಮದ ಸಂದರ್ಭದಲ್ಲಿ, ನಮ್ಮೆಲ್ಲರ ಹೆಮ್ಮೆಯ ಕ್ಷಣಗಳನ್ನು ಆಚರಿಸೋಣ.

MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE • MOKS • 30 YEARS OF EXCELLENCE •

ಗ್ಯಾಲರಿ

ಅಸ್ಸಅದ ಸುವನೀರ್ ಪೋಸ್ಟರ್ ಬಿಡುಗಡೆ

ಅಸ್ಸಅದ ಸುವನೀರ್ ಪೋಸ್ಟರ್ ಬಿಡುಗಡೆ

ಜಾಮಿಯ ಸಅದಿಯ 55ನೇ ವಾರ್ಷಿಕ ಸಮ್ಮೇಳನದ ಪ್ರಯುಕ್ತ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಹೊರತರಲಿರುವ ಅಸ್ಸಆದ ಸುವನೀರ್ ಸಮಿತಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

MUS ರಾಜ್ಯ ನಾಯಕರ ಭೇಟಿ

MUS ರಾಜ್ಯ ನಾಯಕರ ಭೇಟಿ

ರಾಜ್ಯ ವಕ್ಸ್ ಮಂಡಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದರಿಗೆ ಸನ್ಮಾನ. ಅವರು MOKS ಕಚೇರಿಗೆ ಭೇಟಿ ನೀಡಿ 30 ವರ್ಷದ ಸಂಭ್ರಮದ ಕುರಿತು ಸಲಹೆ ನೀಡಿದರು.

ಸಂತೋಷ ಹಂಚಿದ ವಿದ್ಯಾರ್ಥಿಗಳು

ಸಂತೋಷ ಹಂಚಿದ ವಿದ್ಯಾರ್ಥಿಗಳು

ಜಾಮಿಯಾ ಸಅದಿಯಾದಲ್ಲಿ ನಡೆಯಲಿರುವ ಸಮ್ಮೇಳನ ಪ್ರಯುಕ್ತ MOKS ವಿದ್ಯಾರ್ಥಿಗಳು "ಶೇರಿಂಗ್ ಹ್ಯಾಪಿನೆಸ್" ಎಂಬ ಶೀರ್ಷಿಕೆಯಡಿ ಸಿಹಿತಿಂಡಿಗಳನ್ನು ವಿತರಿಸಿ ಪ್ರಚಾರಯಾತ್ರೆ ಕೈಗೊಂಡರು.

ಅಸ್ಸಅದ ಸುವನೀರ್ ಪೋಸ್ಟರ್ ಬಿಡುಗಡೆ

ಅಸ್ಸಅದ ಸುವನೀರ್ ಪೋಸ್ಟರ್ ಬಿಡುಗಡೆ

ಜಾಮಿಯ ಸಅದಿಯ 55ನೇ ವಾರ್ಷಿಕ ಸಮ್ಮೇಳನದ ಪ್ರಯುಕ್ತ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಹೊರತರಲಿರುವ ಅಸ್ಸಆದ ಸುವನೀರ್ ಸಮಿತಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

MUS ರಾಜ್ಯ ನಾಯಕರ ಭೇಟಿ

MUS ರಾಜ್ಯ ನಾಯಕರ ಭೇಟಿ

ರಾಜ್ಯ ವಕ್ಸ್ ಮಂಡಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದರಿಗೆ ಸನ್ಮಾನ. ಅವರು MOKS ಕಚೇರಿಗೆ ಭೇಟಿ ನೀಡಿ 30 ವರ್ಷದ ಸಂಭ್ರಮದ ಕುರಿತು ಸಲಹೆ ನೀಡಿದರು.

ಸಂತೋಷ ಹಂಚಿದ ವಿದ್ಯಾರ್ಥಿಗಳು

ಸಂತೋಷ ಹಂಚಿದ ವಿದ್ಯಾರ್ಥಿಗಳು

ಜಾಮಿಯಾ ಸಅದಿಯಾದಲ್ಲಿ ನಡೆಯಲಿರುವ ಸಮ್ಮೇಳನ ಪ್ರಯುಕ್ತ MOKS ವಿದ್ಯಾರ್ಥಿಗಳು "ಶೇರಿಂಗ್ ಹ್ಯಾಪಿನೆಸ್" ಎಂಬ ಶೀರ್ಷಿಕೆಯಡಿ ಸಿಹಿತಿಂಡಿಗಳನ್ನು ವಿತರಿಸಿ ಪ್ರಚಾರಯಾತ್ರೆ ಕೈಗೊಂಡರು.

ಗ್ರಂಥಾಲಯ
"

ಹುತಾತ್ಮನ ರಕ್ತಕ್ಕಿಂತ ವಿದ್ವಾಂಸನ ಲೇಖನಿಯ ಮಸಿ ಮಹತ್ವದಾಯಕ

(ಹದೀಸ್)

Jamia Sa'adiya Founder

M.A. Ustad

ಓದು-ಬರಹ ಉಸ್ತಾದರ ಹೋಬಿ. 1951ರಲ್ಲಿ ಪ್ರಕಟಗೊಂಡ ಮೊದಲ ಲೇಖನದಿಂದ ಈ ತನಕ ಅದೆಷ್ಟೋ ಸಾವಿರ ಲೇಖನಗಳನ್ನು ವಿವಿಧ ನಿಯತ ಕಾಲಿಕಗಳಲ್ಲಿ ಬರೆದಿದ್ದಾರೆ. 1951ರಲ್ಲಿ ಹೊರತಂದ 'ಅಲ್ ಕಿತಾಬುಲ್ ಅವ್ವಲು ಫೀ ತಾರೀಖಿ ರ್ರಸೂಲ್' ನಿಂದ ಹಿಡಿದು ಅರಬಿ, ಅರಬಿ ಮಲಯಾಳಂ, ಮಲಯಾಳಂ ಭಾಷೆಗಳಲ್ಲಿ ಅಮೂಲ್ಯವಾದ ಹಲವಾರು ಗ್ರಂಥಗಳನ್ನು ರಚಿಸಿದರು. 'ಇಸ್ಲಾಮೀ ಚಿಂತನೆ: ಸತ್ಯ ಮತ್ತು ಮಿಥ್ಯ', 'ಮೌದೂದಿ ಖಂಡನೆ', 'ತ ಬ್ಲೀಗ್ ಜಮಾಅತ್' ಮೊದಲಾದವು ನೂತನವಾದಿಗಳ ನಿಜಬಣ್ಣವನ್ನು ಸಮಾಜಕ್ಕೆ ತೋರಿಸಿಕೊಟ್ಟರೆ, 'ಮುಸ್ಲಿಮರು ಮತ್ತು ಶರೀಆತ್ ನಿಮಯಗಳು', 'ಸೋಶಲಿಸಂ, ಕಮ್ಯೂನಿಸಂ, ಇಸ್ಲಾಂ' ಮೊದಲಾದವು ಜಾಗತಿಕ ಇಸ್ಲಾಮೀ ಬೆಳವಣಿಗೆಗಳ ಬಗ್ಗೆಗಿನ ಅವರ ಅಗಾಧ ಪಾಂಡಿತ್ಯಕ್ಕೆ ಸಾಕ್ಷಿ ನಿಲ್ಲುತ್ತದೆ. ಚರಿತ್ರೆ, ಆಧ್ಯಾತ್ಮಿಕ, ವೈಚಾರಿಕ ಕೃತಿಗಳು ಧಾರಾಳ ಇವೆ. ಈ ಪೈಕಿ 'ತಬ್ಲೀಗಿನ ಅಂತರ್ಯ', 'ಜಮಾಅತೇ ಇಸ್ಲಾಮೀ', 'ಸಮಸ್ತ: ನೆನಪಿನ ಪುಟಗಳಲ್ಲಿ', 'ಅಲ್ಲಾಹನ ಔಲಿಯಾಗಳು' ಪ್ರಕಟಗೊಂಡಿದ್ದು, ಅವರ ಬೃಹತ್ ಪ್ರವಾದಿ ಚರಿತೆ ಕೃತಿ 'ಲೋಕಾನುಗ್ರಹಿ'ಯು ಕನ್ನಡೀಕರಣಗೊಂಡು ಅಲ್ ಅನ್ಸಾರ್‌ನಲ್ಲಿ ಪ್ರಕಟವಾಗಿದೆ. ಉಸ್ತಾದರ ಕೃತಿಗಳು ಆಳಅಧ್ಯಯನದಿಂದ ರೂಪುಗೊಂಡಿರುವುದರಿಂದ ರೆಫರೆನ್ಸ್ ಗ್ರಂಥವಾಗಿಯೂ ಬಳಕೆಗೆ ಬರುತ್ತವೆ. ಚಿಂತನಾರ್ಹ ವಿಷಯಗಳಿಂದ ಜ್ಞಾನ ಸಮೃದ್ಧವಾಗಿ ಹೊರಬರುವುದು ಉಸ್ತಾದರ ಕೃತಿಗಳ ಹಿರಿಮೆ.

"ಮಕ್ಕಳೇ ಓದಿರೀ, ಎಲ್ಲಾ ಪುಸ್ತಕ ಓದಿ, ಜ್ಞಾನ ಬೆಳೆಸಿ."

ನಮ್ಮ ಗ್ರಂಥಾಲಯ

ಜ್ಞಾನ ಮತ್ತು ಸಂಸ್ಕೃತಿಯ ಸಂಗಮ

ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹವಲ್ಲ; ಅದು ಜ್ಞಾನದ ದೇವಾಲಯ. MOKS ನ ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಅಪಾರವಾದ ಜ್ಞಾನವನ್ನು ಪಡೆಯಲು, ಹೊಸ ಯೋಚನೆಗಳನ್ನು ಅನ್ವೇಷಿಸಲು ಮತ್ತು ತಮ್ಮ ಓದುವಿಕೆಯ ಮೂಲಕ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ಒಂದು ಶಾಂತವಾದ, ಸ್ಫೂರ್ತಿದಾಯಕ ವಾತಾವರಣವನ್ನು ಒದಗಿಸುತ್ತದೆ.

ಗ್ರಂಥಾಲಯ ನೋಡಿ

ಸಂಪರ್ಕಿಸಿ

ನಮ್ಮನ್ನು ಸಂಪರ್ಕಿಸಿ

ನಿಮ್ಮ ಪ್ರಶ್ನೆಗಳು ಅಥವಾ ಸಲಹೆಗಳಿಗಾಗಿ ನಮಗೆ ಬರೆಯಿರಿ. ನಾವು ಯಾವಾಗಲೂ ನಿಮ್ಮ ಸೇವೆಗೆ ಸಿದ್ಧರಿದ್ದೇವೆ.

ಸ್ಥಳ

Jamia Sa'adiya Arabia, Kasaragod, Kerala

ದೂರವಾಣಿ

+91 XXXXX XXXXX

ನಮ್ಮ ಸೋಶಿಯಲ್ ಮೀಡಿಯಾ