ನಮ್ಮ ಗ್ಯಾಲರಿ
MOKS ನ ಸ್ಮರಣೀಯ ಕ್ಷಣಗಳು ಮತ್ತು ಚಟುವಟಿಕೆಗಳು

ಅಸ್ಸಅದ ಸುವನೀರ್ ಪೋಸ್ಟರ್ ಬಿಡುಗಡೆ
ಜಾಮಿಯ ಸಅದಿಯ 55ನೇ ವಾರ್ಷಿಕ ಸಮ್ಮೇಳನದ ಪ್ರಯುಕ್ತ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಹೊರತರಲಿರುವ ಅಸ್ಸಆದ ಸುವನೀರ್ ಸಮಿತಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

MUS ರಾಜ್ಯ ನಾಯಕರ ಭೇಟಿ ಮತ್ತು ಸನ್ಮಾನ
ರಾಜ್ಯ ವಕ್ಸ್ ಕೌನ್ಸಿಲ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದರು ಜಾಮಿಅಃ ಸಅದಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ MOKS ಕಚೇರಿಗೆ ಭೇಟಿ ನೀಡಿದರು. ಸಅದಿಯಾದ ಅನುಭವ ಮತ್ತು MOKS ನ 30 ವರ್ಷದ ಸಂಭ್ರಮದ ಕುರಿತು ಸಲಹೆ ನೀಡಿ ಶುಭ ಹಾರೈಸಿದರು. ಅವರನ್ನು ಸನ್ಮಾನಿಸಲಾಯಿತು.

ಸಂತೋಷ ಹಂಚಿಕೊಂಡ ವಿದ್ಯಾರ್ಥಿಗಳು (ಶೇರಿಂಗ್ ಹ್ಯಾಪಿನೆಸ್)
ಜಾಮಿಯಾ ಸಅದಿಯಾದಲ್ಲಿ ನಡೆಯಲಿರುವ ಸನದುಧಾನ ಸಮ್ಮೇಳನ ಮತ್ತು ತಾಜುಲ್ ಉಲಮಾ ನೂರುಲ್ ಉಲಮಾರ ಆಂಡ್ ನೇರ್ಚೆ ಪ್ರಯುಕ್ತ MOKS ವಿದ್ಯಾರ್ಥಿಗಳು "ಶೇರಿಂಗ್ ಹ್ಯಾಪಿನೆಸ್" ಎಂಬ ಶೀರ್ಷಿಕೆಯಡಿ ಪ್ರಚಾರಯಾತ್ರೆ ಕೈಗೊಂಡರು. ಸಿಹಿತಿಂಡಿಗಳನ್ನು ವಿತರಿಸಿ ಸ್ಥಳೀಯರಿಂದ ಉತ್ತಮ ಮೆಚ್ಚುಗೆ ಪಡೆದರು.