ನಮ್ಮ ಶಿಕ್ಷಕರು
MOKS ನ ಜ್ಞಾನದ ದೀಪಗಳು

ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್
ಕುಂಬೋಲ್ ತಂಙಳ್ ಎಂದು ಹೆಸರು ಕೇಳುವಾಗಲೇ ಮನಸ್ಸಿಗೆ ಓಡಿಬರುವ ಹೆಸರು ಕೆ ಎಸ್ ಆಟಕ್ಕೋಯ ತಂಙಳ್ ಎಂದಾಗಿದೆ. ಉತ್ತರ ಕೇರಳ ಮತ್ತು ಕರ್ನಾಟಕದಲ್ಲಿ ಸುಪರಿಚಿತರು. ಹಲವಾರು ಧಾರ್ಮಿಕ, ಶೈಕ್ಷಣಿಕ ಕೇಂದ್ರಗಳಿಗೆ ನೇತೃತ್ವ ನೀಡುವುದರೊಂದಿಗೆ ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಕೇಂದ್ರವಾದ ಜಾಮಿಅ ಸಅದಿಯಾ ಅರಬಿಯಾ ಎಂಬ ವಿದ್ಯಾಸಂಸ್ಥೆಗೆ 2014 ರಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಯಾವುದೇ ರೀತಿಯ ಜಟಿಲ ಸಮಸ್ಯೆಗಳನ್ನು ಲಲಿತವಾಗಿ ಪರಿಹರಿಸಿಕೊಡುವುದರಲ್ಲಿ ನಿಪುಣರು.

ಸಅದುಲ್ ಉಲಮಾ ಶೈಖುನಾ ಎ.ಪಿ ಅಬ್ದುಲ್ಲಾ ಮುಸ್ಲಿಯಾರ್
1940ರಲ್ಲಿ ಮಾಣಿಕೋತ್‌ನಲ್ಲಿ ಜನಿಸಿದ ಅವರು, 1969ರಲ್ಲಿ ಫೈಝಿ ಬಿರುದು ಪಡೆದರು. 1995ರಲ್ಲಿ ಶರೀಅತ್ ಕಾಲೇಜು ಪ್ರಾರಂಭವಾದಾಗ ಮುದರಿಸರಾಗಿ ಅಧಿಕಾರ ವಹಿಸಿಕೊಂಡು, ಎಂ.ಎ.ಉಸ್ತಾದರಿಗೆ ಬೆನ್ನೆಲುಬಾಗಿ ನಿಂತರು. ಸುದೀರ್ಘ 55 ವರ್ಷಗಳ ಸಅದಿಯಾದ ಪಯಣದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಇದೀಗ ಸಅದಿಯಾ ಯುನಿವರ್ಸಿಟಿಯ ಪ್ರಧಾನ ಕಾರ್ಯದರ್ಶಿ ಮತ್ತು ಶರೀಅತ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ.

ಕೆ.ಕೆ. ಹುಸೈನ್ ಬಾಖವಿ
ವಯನಾಡ್ ಜಿಲ್ಲೆಯ ತರಿಯಾಡ್‌ನಲ್ಲಿ ಜನಿಸಿದ ಅವರು, ವಿವಿಧ ದರ್ಸ್‌ಗಳಲ್ಲಿ ವಿದ್ಯಾಭ್ಯಾಸ ಪಡೆದರು. 1985ರಿಂದ ಜಾಮಿಅ ಸಅದಿಯಾ ಶರೀಅತ್ ಕಾಲೇಜಿನ ಮುದರಿಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕು ದಶಕಗಳ ಅಧ್ಯಾಪನದಲ್ಲಿ ಸಹಸ್ರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ.

ಉಬೈದುಲ್ಲಾಹ್ ಸಅದಿ ಅನ್ನದ್ವಿ
1960ರಲ್ಲಿ ಜನಿಸಿದ ಅವರು, 1987ರಲ್ಲಿ ಸಅದಿ ಬಿರುದು ಪಡೆದರು. ಲಕ್ಕೋ ದಾರುಲ್ ಉಲೂಂ ನದ್ವತುಲ್ ಉಲಮಾದಲ್ಲಿ ಅರಬಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು 1997ರಲ್ಲಿ ಈಜಿಪ್ಟಿನ ಅಲ್ ಅಝರ್ ಯುನಿವರ್ಸಿಟಿಯಲ್ಲಿ ದಅವಾ ಕೋರ್ಸ್ ಪೂರ್ತಿಗೊಳಿಸಿದರು. 1989ರಿಂದ ಶರೀಅತ್ ಕಾಲೇಜ್‌ನ ಪ್ರೊಫೆಸರ್ ಆಗಿದ್ದಾರೆ.

ಮುಹಮ್ಮದ್ ಅಲಿ ಸಖಾಫಿ ತ್ರಿಕರಿಪುರ್
1964ರಲ್ಲಿ ತ್ರಿಕರಿಪುರಿನಲ್ಲಿ ಜನಿಸಿದ ಅವರು, ಮರ್ಕಝ್‌ನಲ್ಲಿ ಹೊಸದಾಗಿ ಶರೀಅತ್ ಕಾಲೇಜ್ ಸ್ಥಾಪನೆಗೊಂಡ ಸುದ್ದಿ ಕೇಳಿ ಸಖಾಫಿ ಬಿರುದುದಾರರಾಗಿ ಹೊರ ಹೊಮ್ಮಿದರು. ಇಸ್ಲಾಂ ಎದುರಿಸುವ ನೂತನ ಯುಕ್ತಿವಾದ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖರಾಗಿದ್ದಾರೆ. ದಶಕಗಳ ಕಾಲ ಜಾಮಿಅ ಸಅದಿಯಾದಲ್ಲಿ ಪ್ರಧಾನ ಮುದರಿಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಬ್ದುಲ್ಲ ಬಾಖವಿ ಕುಟ್ಟಿಶ್ಯೇರಿ
ಮಲಪ್ಪುರಂ ಜಿಲ್ಲೆಯಲ್ಲಿ ಜನಿಸಿದ ಅವರು 1988ರಲ್ಲಿ ವೆಲ್ಲೂರು ಬಾಖಿಯಾತ್‌ನಲ್ಲಿ ಬಾಖವಿ ಬಿರುದು ಪಡೆದರು. ವೆಳ್ಳುವಂಬ್ರಂ ಅತ್ರಾಣಿಕ್ಕಲ್ ಶಿಹಾಬುಲ್ ಉಲೂಂ ಅರಬಿಕ್ ಕಾಲೇಜು ಸೇರಿದಂತೆ ವಿವಿಧ ಕಡೆ ಮುದರಿಸರಾಗಿ ಸೇವೆ ಸಲ್ಲಿಸಿದ್ದಾರೆ. 1996ರಿಂದ ಜಾಮಿಅ ಸಅದಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ 3 ದಶಕಗಳಿಂದ ಶರೀಅತ್ ಕಾಲೇಜಿನ ಪ್ರಧಾನ ಮುದರಿಸರಾಗಿದ್ದಾರೆ.

ಮುಹಮ್ಮದ್ ಸ್ವಾಲಿಹ್ ಸಅದಿ
1960ರಲ್ಲಿ ಜನಿಸಿದ ಅವರು, 1983ರಲ್ಲಿ ಸಅದಿ ಬಿರುದು ಪಡೆದರು. 1985ರಿಂದ ಜಾಮಿಅ ಸಅದಿಯಾದಲ್ಲಿ ಮುದರಿಸರಾಗಿ ಸೇವೆ ಗೈಯ್ಯುತ್ತಿದ್ದಾರೆ. ಕರ್ಮಶಾಸ್ತ್ರ, ಹದೀಸ್, ಮಲ್ಬುಬ್ ಚರ್ಚೆಯನ್ನೊಳಗೊಂಡ ಆಕರ್ಷಣೀಯ ತರಗತಿ ಇವರ ವೈಶಿಷ್ಟತೆಯಾಗಿದೆ. ಲೇಖಕರೂ ಆದ ಇವರ ಹಲವು ಕೃತಿಗಳು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ.

ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್
ಕುಂಬಳೆ ಸಮೀಪದ ಕಳತ್ತೂರು ಮೂಲದ ಅವರು, ಉಪ್ಪಳಕುನ್ನು ಜುಮಾ ಮಸೀದಿಯಲ್ಲಿ 10 ವರ್ಷಗಳ ಕಾಲ ಕಲಿತರು. 1985ರಲ್ಲಿ ಸಅದಿಯಾದಲ್ಲಿ ಸಅದಿ ಬಿರುದು ಪಡೆದರು. ತಲಪ್ಪಾಡಿ ಸಮೀಪದ ಕೆ.ಸಿ ರೋಡಿನಲ್ಲಿ 18 ವರ್ಷಗಳ ಕಾಲ ದರ್ಸ್ ನಡೆಸಿದ್ದಾರೆ. ಇದೀಗ ಸಅದಿಯಾ ಶರೀಅತ್ ಕಾಲೇಜು ಮುದರಿಸರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಫರ್ ಉಮರ್ ಸಅದಿ ಅಚೂರು
1980ರಲ್ಲಿ ವಯನಾಡ್‌ನ ಅಚೂರ್‌ನಲ್ಲಿ ಜನಿಸಿದ ಅವರು, 2002ರಲ್ಲಿ ಸಅದಿ ಪದವಿ ಮತ್ತು 2003ರಲ್ಲಿ ಅರಬಿಯಲ್ಲಿ ತಖಸ್ಸುಸ್ ಪದವಿ ಪಡೆದರು. ಪ್ರಸ್ತುತ ಸಅದಿಯಾದ ಮುದರಿಸರಾಗಿ, ಅಲಪ್ಪುಝ ಪಾಣವಳ್ಳಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ICERT ಯೋಜನೆಯ ನಿರ್ದೇಶಕರಾಗಿದ್ದಾರೆ.

ಅಲಿ ಅಸ್ಕರ್ ಬಾಖವಿ
1978ರಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ಜನಿಸಿದ ಅವರು, 1999ರಲ್ಲಿ ಬಾಕಿಯಾತು ಸ್ವಾಲಿಹಾತ್‌ನಿಂದ ಬಾಖಾವಿ ಪದವೀಧರರಾದರು. ಖತೀಬ್ ಮತ್ತು ಮುದರಿಸ್ ಆಗಿ ಅಪಾರ ಅನುಭವ ಹೊಂದಿದ್ದಾರೆ. ಜ್ಯೋತಿಷ್ಯ, ಸಮರ್ಥ ಸಂವಹನ, ವಿಮರ್ಶಾತ್ಮಕ ಚಿಂತನೆ, ವ್ಯಾಪಾರ ಅಭಿವೃದ್ಧಿ ಮುಂತಾದ ಕೌಶಲ್ಯಗಳನ್ನು ಹೊಂದಿದ್ದಾರೆ. 2024ರಲ್ಲಿ ಜಾಮಿಯಾ ಸಅದಿಯಾದ ಪ್ರಮುಖ ಮುದರಿಸರಾಗಿ ಸೇವೆ ಸಲ್ಲಿಸುತ್ತಿದ್ದಾರೆ.